ಸ್ನೇಹಿತರೆ ಇಂದಿನ ನನ್ನ ಪ್ರವಾಸ ಕಥನ ನಾನು ಇತ್ತೀಚಿಗೆ ಗಂಡಿಕೋಟ ಎಂಬ ಆಂದ್ರ ಪ್ರದೇಶದ ಹಳ್ಳಿ ಗೆ ಮಾಡಿದ ಬೈಕ್ ಸವಾರಿ . ಜನವರಿ ೨೪, ೨೫ ಹಾಗು ೨೬ ರಜಾ ದಿನಗಳಾಗಿದ್ದರಿಂದ ನಾನು ನನ್ನ ಮಡದಿ ಮೈಸೂರಿನ ಗೋಪಾಲ ಸ್ವಾಮಿ ಬೆಟ್ಟಕ್ಕೆ ಬೈಕ್ ರೈಡ್ ಹೋಗಣ ಎಂದು ವಿಚಾರಿಸಿದ್ದೆವು ಆದರೆ ಕಾರಣ ವಶಾತ್ ನನ್ನ ಮಡದಿಗೆ ಬರಲಾಗದ ಕಾರಣ ಹಾಗು ನಾನು ಗೋಪಾಲಸ್ವಾಮಿ ಬೆಟ್ಟವನು ಹಲವಾರು ಬಾರಿ ನೋಡಿದ್ದರಿಂದ ನಾನು ಆಂದ್ರ ಪ್ರದೇಶದ ಗಂಡಿಕೋಟ ಹಳ್ಳಿ ಗೆ ಹೋಗಲು ಮುಂದಾದೆ .
ಬೆಂಗಳೂರಿಂದ ೨೭೦ ಕಿಲೋಮೀಟರು ದೂರದಲ್ಲಿ ಇರುವ ಈ ಒಂದು ಪುಟ್ಟ ಹಳ್ಳಿ ಒಂದು ಅದ್ಬುತವಾದ ಪ್ರಕೃತಿ ಬಂಡಾರವನ್ನೇ ಹೊಂದಿದೆ. ಪೆನ್ನಾರ್ ಎಂಬ ನದಿಯ ದಡದಲ್ಲಿ ಇರುವ ಈ ಹಳ್ಳಿ ಭಾರತದ ಗ್ರಾಂಡ್ ಕ್ಯಾನ್ಯನ್ ಎಂದು ಪ್ರಿಸಿದ್ದಿ . ಚಂಬಲ್ ಕಣಿವೆ ಯಂತೆ ಕೋಟ್ಯಂತರ ವರುಷಗಳಿಂದ ಬಂಡೆಯನ್ನು ನೀರು ಕೊರೆದು ಕಣಿವೆಯು ಸೃಷ್ಟಿ ಯಾದಂತಿದೆ.
ಬೆಳಿಗ್ಗೆ ೬. ೩೦ಕೆ ಹೊರಟು ಬೆಂಗಳೂರು ಹೈದರಾಬಾದ್ ಹೆದ್ದಾರಿ NH ೭ ರಲ್ಲಿ ಬರುವ ಕಾಮತ ಅಲ್ಲಿ ರುಚಿಯಾದ ತಿಂಡಿ ಮುಗಿಸಿ , ಲೇಪಾಕ್ಷಿಯನ್ನು ದಾಟಿ , ಪುಟ್ಟಪರ್ತಿ ಕಡೆ ಹೋಗುವ ದಾರಿಯಲ್ಲಿ ಸಾಗಿ ಮತ್ತೆ ಗೊರಂತ್ಲ ಎಂಬ ಹಳ್ಳಿಯಲ್ಲಿ ಬಲಕ್ಕೆ ತಿರುಗಿ ಕದರಿ , ಮುದ್ದನೂರು ಮುಕಾಂತರ ಗಂಡಿಕೋಟಕ್ಕೆ ತಲುಪಿದೆ.
ಗಂಡಿಕೋಟವನ್ನು ಸುಮಾರು ೧೨. ೩೦ ಮದ್ಯಾನ ತಲುಪಿದೆ. ಆಂದ್ರ ಪ್ರದೇಶದ ಸರಕಾರ ನಡೆಸುವ ರೆಸಾರ್ಟ್ ನಲ್ಲಿ ಇರಲು ರೂಂ ಕೇಳಲು ಹೋದೆ , ಆದರೆ ಅಲ್ಲಿ ರೂಂ ಇರಲಿಲ್ಲ , ಬೈಕ್ ನಲ್ಲಿ ಒಬ್ಬಂಟಿಯಾಗಿ ಬಂದ ನನ್ನನು ನೋಡಿ ರೆಸಾರ್ಟ್ ಮ್ಯಾನೇಜರ್ ರಾತ್ರಿ ಮಲಗಲು ಜಾಗ ಕೊಡಲು ಒಪ್ಪಿದರು. ನಾನು ನನ್ನ ಜಾಕೆಟ್ , ಬ್ಯಾಗ್ ಎಲ್ಲವನ್ನು ರೆಸಾರ್ಟ್ ನಲ್ಲಿ ಬಿಟ್ಟು ಕ್ಯಾಮೆರಾ ವನ್ನು ಹೊತ್ತು ಊಟ ಮುಗಿಸಿ ಟ್ರೆಕಿಂಗ್ ಗೆ ಹೊರಟೆ .
ನಾನು ಗಂಡಿಕೋಟಕ್ಕೆ ಹೋಗುವ ಮುನ್ನ ಕೆಲವು ಛಾಯಾ ಚಿತ್ರ ಗಳಲ್ಲಿ ಗಂಡಿಕೋಟವನ್ನು ನೋಡಿದ್ದೇ ,ಆದರೆ ಈ ಪ್ರಕೃತಿಯ ವಿಸ್ಮಯ ವನ್ನು ಕಣ್ಣಾರೆ ನೋಡುವುದೇ ಒಂದು ಆನಂದ . ನಾನು ಟ್ರೆಕಿಂಗ್ ಮಾಡಿ ಬಂಡೆಗಳ ಮೇಲೆ ಹತ್ತಿ ಒಂದು ಬಂಡೆಯಮೇಲೆ ಕುಳಿತು ವಿಶ್ರಮಿಸಿದೆ . ನೋಟ ವಿಹಂಗಮವಾಗಿತ್ತು ಗಾಳಿ ಮುಕಕ್ಕೆ ಬಡಿದು ಬೈಕ್ ಸವಾರಿಯ ಶ್ರಮವೆಲ್ಲ ದೂರವಯ್ತು
ಮೂರು ಗಂಟೆಗಳ ಕಾಲ ಅಲ್ಲೇ ಕಾಲ ಕಳೆದು ನಂತರ ಅಲ್ಲೇ ಪಕ್ಕದಲ್ಲಿದ್ದ ಒಂದು ಪಾಳು ಬಿದ್ದ ದೇಗುಲಕ್ಕೆ ಹೋಗಿ ಅಲ್ಲಿ ಕೆಲವು ಛಾಯಾಚಿತ್ರ ಗಳನ್ನು ತೆಗೆದು ಅಲ್ಲಿಂದ ರೆಸಾರ್ಟ್ ಗೆ ತಲುಪಿದೆ , ಅಲ್ಲೇ ರಾತ್ರಿಯ ಊಟ ಮಾಡಿ ಮ್ಯಾನೇಜರ್ ಕೊಟ್ಟ ಕೊಣೆ ಯಲ್ಲಿ ನಿದ್ರಿಸಿದೆ
ಮುಂಜಾನೆ ೫ ಗಂಟೆಗೆ ಎದ್ದು ಮತ್ತೆ ಸೂರ್ಯೋದಯದ ಛಾಯಾಚಿತ್ರ ತೆಗೆಯಲು ೬ ಗಂಟೆ ಸುಮಾರಿಗೆ ಗಂಡಿಕೋಟಕ್ಕೆ ಹೊರಟೆ , ಮೈ ಜುಮ್ಮೆನಿಸುವ ಸೂರ್ಯೋದಯವನ್ನು ಕಂಡೆ , ಪ್ರಕೃತಿಯ ಸೊಬಗನ್ನು ವರ್ಣಿಸಲು ಪದಪುಂಜಗಳು ಸಾಲದು , ದಿನಪನ ಈ ಕರುಣೆಯನ್ನು ಪೋಗಳಲು ಒಂದು ಜನುಮ ಸಾಲದು. ಪುಳ ಕಿತ ಗೊಂಡ ನಾನು ಅಲ್ಲಿಂದ ಪಕ್ಕದಲ್ಲೇ ಇದ್ದ ಜುಮ್ಮಾ ಮಸೀದಿ ಗೆ ಹೊದೆ.
ಸುಂದರವಾದ ಜುಮ್ಮಾ ಮಸೀದಿಯನ್ನು ಕಂಡು ಅಲ್ಲಿಂದ ಹಿಂದಿರುಗಿ ಸುಮಾರು ಸಂಜೆ ೩ ಗಂಟೆಗೆ ಬೆಂಗಳೂರಿನ ನನ್ನ ಮನೆಗೆ ಬಂದು ಸೆರಿದೆ.
ಪ್ರಯಾಣದ ಒಟ್ಟು ವೆಚ್ಹ : ೧೫೦೦ ರೂ .
ರೆಸಾರ್ಟ್ ಗೆ ಮೊಬೈಲ್ ಸಂಖ್ಯೆ : ೦-೭೩೮೨೨-೩೭೩೮೦
ಪ್ರಯಾಣದ ಒಟ್ಟು ಮೈಲಿ : ೬೦೦ ಕೆಎಂ
ಶುಭವಾಗಲಿ, ಬಗವಂತ ನಿಮ್ಮೊಂದಿಗಿರಲಿ .
ಇಂತಿ
ನಿಮ್ಮ ಗೆಳೆಯ , ಸಂತೋಷ
![]() |
ರಮಣೀಯ ಗಂಡಿಕೋಟ |
ಬೆಂಗಳೂರಿಂದ ೨೭೦ ಕಿಲೋಮೀಟರು ದೂರದಲ್ಲಿ ಇರುವ ಈ ಒಂದು ಪುಟ್ಟ ಹಳ್ಳಿ ಒಂದು ಅದ್ಬುತವಾದ ಪ್ರಕೃತಿ ಬಂಡಾರವನ್ನೇ ಹೊಂದಿದೆ. ಪೆನ್ನಾರ್ ಎಂಬ ನದಿಯ ದಡದಲ್ಲಿ ಇರುವ ಈ ಹಳ್ಳಿ ಭಾರತದ ಗ್ರಾಂಡ್ ಕ್ಯಾನ್ಯನ್ ಎಂದು ಪ್ರಿಸಿದ್ದಿ . ಚಂಬಲ್ ಕಣಿವೆ ಯಂತೆ ಕೋಟ್ಯಂತರ ವರುಷಗಳಿಂದ ಬಂಡೆಯನ್ನು ನೀರು ಕೊರೆದು ಕಣಿವೆಯು ಸೃಷ್ಟಿ ಯಾದಂತಿದೆ.
ಬೆಳಿಗ್ಗೆ ೬. ೩೦ಕೆ ಹೊರಟು ಬೆಂಗಳೂರು ಹೈದರಾಬಾದ್ ಹೆದ್ದಾರಿ NH ೭ ರಲ್ಲಿ ಬರುವ ಕಾಮತ ಅಲ್ಲಿ ರುಚಿಯಾದ ತಿಂಡಿ ಮುಗಿಸಿ , ಲೇಪಾಕ್ಷಿಯನ್ನು ದಾಟಿ , ಪುಟ್ಟಪರ್ತಿ ಕಡೆ ಹೋಗುವ ದಾರಿಯಲ್ಲಿ ಸಾಗಿ ಮತ್ತೆ ಗೊರಂತ್ಲ ಎಂಬ ಹಳ್ಳಿಯಲ್ಲಿ ಬಲಕ್ಕೆ ತಿರುಗಿ ಕದರಿ , ಮುದ್ದನೂರು ಮುಕಾಂತರ ಗಂಡಿಕೋಟಕ್ಕೆ ತಲುಪಿದೆ.
![]() |
ಸೂರ್ಯಕಾಂತಿ |
![]() |
ನನ್ನ ರಾಯಲ್ ಎನ್ಫ಼ಿಎಲ್ದ್ |
ಗಂಡಿಕೋಟವನ್ನು ಸುಮಾರು ೧೨. ೩೦ ಮದ್ಯಾನ ತಲುಪಿದೆ. ಆಂದ್ರ ಪ್ರದೇಶದ ಸರಕಾರ ನಡೆಸುವ ರೆಸಾರ್ಟ್ ನಲ್ಲಿ ಇರಲು ರೂಂ ಕೇಳಲು ಹೋದೆ , ಆದರೆ ಅಲ್ಲಿ ರೂಂ ಇರಲಿಲ್ಲ , ಬೈಕ್ ನಲ್ಲಿ ಒಬ್ಬಂಟಿಯಾಗಿ ಬಂದ ನನ್ನನು ನೋಡಿ ರೆಸಾರ್ಟ್ ಮ್ಯಾನೇಜರ್ ರಾತ್ರಿ ಮಲಗಲು ಜಾಗ ಕೊಡಲು ಒಪ್ಪಿದರು. ನಾನು ನನ್ನ ಜಾಕೆಟ್ , ಬ್ಯಾಗ್ ಎಲ್ಲವನ್ನು ರೆಸಾರ್ಟ್ ನಲ್ಲಿ ಬಿಟ್ಟು ಕ್ಯಾಮೆರಾ ವನ್ನು ಹೊತ್ತು ಊಟ ಮುಗಿಸಿ ಟ್ರೆಕಿಂಗ್ ಗೆ ಹೊರಟೆ .
ನಾನು ಗಂಡಿಕೋಟಕ್ಕೆ ಹೋಗುವ ಮುನ್ನ ಕೆಲವು ಛಾಯಾ ಚಿತ್ರ ಗಳಲ್ಲಿ ಗಂಡಿಕೋಟವನ್ನು ನೋಡಿದ್ದೇ ,ಆದರೆ ಈ ಪ್ರಕೃತಿಯ ವಿಸ್ಮಯ ವನ್ನು ಕಣ್ಣಾರೆ ನೋಡುವುದೇ ಒಂದು ಆನಂದ . ನಾನು ಟ್ರೆಕಿಂಗ್ ಮಾಡಿ ಬಂಡೆಗಳ ಮೇಲೆ ಹತ್ತಿ ಒಂದು ಬಂಡೆಯಮೇಲೆ ಕುಳಿತು ವಿಶ್ರಮಿಸಿದೆ . ನೋಟ ವಿಹಂಗಮವಾಗಿತ್ತು ಗಾಳಿ ಮುಕಕ್ಕೆ ಬಡಿದು ಬೈಕ್ ಸವಾರಿಯ ಶ್ರಮವೆಲ್ಲ ದೂರವಯ್ತು
![]() |
ಬಂಡೆಯಮೇಲೆ ವಿಶ್ರಮಿಸಿದ ಸ್ಥಳ |
![]() |
ಪಾಳು ಬಿದ್ದಿರುವ ದೇಗುಲ |
![]() |
ವಿಹಂಗಮ ಸೂರ್ಯಾಸ್ಥ |
![]() |
ವಿಹಂಗಮ ಸೂರ್ಯೋದಯ |
![]() |
ಜುಮ್ಮಾ ಮಸೀದಿ |