Sunday, March 20, 2022

ಶ್ರೀ ಕ್ಷೇತ್ರ ಅಹೋಬಲ ( Sri Kshetra Ahobalam or Ahobilam)

ನಮಸ್ಕಾರ  ಸ್ನೇಹಿತರೆ  ಮಾರ್ಚ್  11 ,12 ಹಾಗು  13 ಮಂತ್ರಾಲಯ  ಶ್ರೀ  ಗುರು  ರಾಘವೇಂದ್ರ  ಸ್ವಾಮಿಗಳ  ಹಾಗು  ಅಹೋಬಲ  ನರಸಿಂಹ ನ  ಶ್ರೀ  ಚರಣಗಳ  ದರ್ಶನ  ಪಡೆಯಲು  ಹೋಗಿದ್ದೆ.


ಮಾರ್ಚ್ 10 ರ ಸಂಜೆ ಹೊರಟು ಆಂಧ್ರಪ್ರದೇಶ ದ  ಗೂಟಿ ಯಲ್ಲಿ ರಾತ್ರಿ ಯನ್ನು ಕಳೆದು ಮುಂಜಾನೆ 4 .30 ಕ್ಕೆ ಹೊರಟು ಮಂತ್ರಾಯವನ್ನು ಸೇರಿದೆ. ಅಲ್ಲಿ ಗುರುರಾಯರ ಬೃಂದಾವನ ದರುಶನವನ್ನು ಮಾಡಿ ಮನ ಪುಳಕಿತ ವಾಯಿತು , ಅಲ್ಲಿಂದ ಹೊರಟು ಶ್ರೀ ರಾಯರು 12 ವರುಷಗಳ ಕಾಲ ತಪಸ್ಸು ಮಾಡಿದ ಪುಣ್ಯ ಕ್ಷೇತ್ರ ಶ್ರೀ ಪಂಚಮುಖಿ ಆಂಜನೇಯ ನ ಕ್ಷೇತ್ರ ಕ್ಕೆ ಹೋಗಿ ಮುಖ್ಯ ಪ್ರಾಣ ದೇವರ ದರುಶನವನ್ನು ಪಡೆದೆ. ಈ ಕ್ಷೇತ್ರ ದಲ್ಲಿ ಶ್ರೀ ಪ್ರಾಣ ದೇವರು ಹನುಮ , ಗರುಡ , ಹಯಗ್ರೀವ , ನರಸಿಂಹ ಹಾಗು ಶ್ರೀ ಯೋಗ ವರಾಹ ನಾಗಿ ಪಂಚ ರೂಪದಲ್ಲಿ ಶ್ರೀ ಸ್ವಾಮಿಗಳಿಗೆ ದರುಶನ ನೀಡಿದ್ದಾನೆ.

ಮಂತ್ರಾಲಯ ಬೆಂಗಳೂರಿನಿಂದ 360 kms ದೂರದಲ್ಲಿದೆ , ಮಂತ್ರಾಲಯದಿಂದ ಪಂಚಮುಖಿ 25  kms ದೂರದಲ್ಲಿ ಇದೆ , ಇಲ್ಲಿ ದರುಶನ ಪಡೆದು ನಾನು ಅಹೋಬಲ ನರಸಿಂಹನ ದರುಶನಕ್ಕೆ ಹೊರಟೆ. ಅಹೋಬಲ ಮಂತ್ರಾಲಯದಿಂದ 250 kms ದೂರದಲ್ಲಿ ಇದೆ . ಅಹೋಬಲ 108 ವೈಷ್ಣವ ದಿವ್ಯ ಕ್ಷೇತ್ರ ಗಳಲ್ಲಿ 98 ನೇ ಯದು , ಅಹೋಬಲ ಸಾಕ್ಷಾತ್ ಶ್ರೀ ನರಸಿಂಹ ದೇವರು ಶ್ರೀ ಮಹಾವಿಷ್ಣು ವಿನ 4 ನೇ ಅವತಾರವಾಗಿ ಅವತಾರ ತಾಳಿದ ಪುಣ್ಯ ಭೂಮಿ. ನಲ್ಲಮಲ್ಲ ದಟ್ಟ ಅರಣ್ಯಗಳಲ್ಲಿ ಶ್ರೀ ಸ್ವಾಮಿ 9 ರೂಪ ಗಳಲ್ಲಿ ನವ ಗ್ರಹಗಳ ಅಧಿಪತಿ ಯಾಗಿ ನೆಲೆ ನಿಂತಿದ್ದಾನೆ. ನಲ್ಲಮಲ್ಲ ಕಾಡು ಅತಿ ಪುಣ್ಯ ಕಾಡು , ಇದು ಶೇಷನಾಗ ನ ರೂಪದಲ್ಲಿ ಇದೆ , ಇದರ ಮುಡಿ ಶ್ರೀ ತಿರುಪತಿ ವೆಂಕಟರಮಣ , ಇದರ ಮಧ್ಯ ಭಾಗ ಅಹೋಬಲ , ಇದರ ಬಾಲ ಶ್ರೀಶೈಲ ದ ಶ್ರೀ ಸ್ವಾಮಿ ಮಲ್ಲಿಕಾರ್ಜುನ ಹಾಗು ತಾಯಿ ಭ್ರಮರಾಂಬಿಕೆ

 

೧ ಜ್ವಾಲಾ ನರಸಿಂಹ - ಕಂಬ ವನ್ನು ಬೇಧಿಸಿ ಅಟ್ಟಹಾಸದಿಂದ ಮೆರೆಯುತ್ತಿದ್ದ ಕಳ ಹಿರಣ್ಯ ಕಷಿಪು ವಿನ ಹೊಟ್ಟೆ ಸೀಳಿದ ಪುಣ್ಯ ಸ್ಥಳ , ಇಲ್ಲಿ ಶ್ರೀ ಸ್ವಾಮಿ ಶ್ರೀ ಗರುಡ ದೇವರ ಮೇಲೆ ವಿರಾಜಮಾನ ನಾಗಿ ಸ್ವಯಂಭೂ ಜ್ವಾಲಾ ನರಸಿಂಹ ನಾಗಿ ಭಕ್ತ ರನ್ನು ಪೊರುಯುತಿದ್ದಾನೆ.

ಇಲ್ಲಿಗೆ ಹೋಗಲು ದಟ್ಟ ಅರಣ್ಯದ ಮದ್ಯೆ ಕಾಲ್ನಡಿಗೆಯಲ್ಲಿ 12 kms ನಡೆದು ಹೋಗಬೇಕು. ಅಲ್ಲೇ ಪಕ್ಕದಲ್ಲಿ ರಕ್ತ ಕುಂಡ ಎಂಬ ಚಿಕ್ಕ ಕೊಂಡವಿದೆ ಅಲ್ಲೇ ಶ್ರೀ ಸ್ವಾಮಿ ಹಿರಣ್ಯ ಕಷಿಪು ವನ್ನು ಕೊಂದ ನಂತರ ಕೈ ತೊಳೆದ ಸ್ಥಳ ಎಂದು ನಂಬುತ್ತಾರೆ , ಅದರ ಪಕ್ಕದಲ್ಲೇ ಆಕಾಶ ಗಂಗೆ ಜಲಪಾತ , ರಕ್ತ ಮಯನಾದ ಶ್ರೀ ಸ್ವಾಮಿಯು ಸ್ನಾನ ಮಾಡಿದ ಪಾವನ ಸ್ಥಳ . ಇಲ್ಲಿ ಶ್ರೀ ಸ್ವಾಮಿ ಕುಜ ಗ್ರಹಕ್ಕೆ ಅಧಿಪತಿ.

೨ ಉಗ್ರ ನರಸಿಂಹ (Upper Ahobalam ) - ಇಲ್ಲಿ ಶ್ರೀ ಸ್ವಾಮಿ ದೇವತೆಗಳ ಮೊರೆಕೇಳಿ ಸ್ವಲ್ಪ ಶಾಂತನಾಗಿ ಗುಹೆಯೊಳಗೆ ನೆಲೆಸಿದ್ದಾನೆ , ಇಲ್ಲೇ ಶ್ರೀ ರುದ್ರ ದೇವರು ಶ್ರೀ ಸ್ವಾಮಿ ಗೆ " ಉಗ್ರಂ ವೀರಂ ಮಹಾ ವಿಷ್ಣುಮ್ ಜ್ವಲಂತಂ ಸರ್ವತೋ ಮುಖಂ  , ನರಸಿಂಹಂ ಭೀಷಣಂ ಭದ್ರಂ ಮೃತ್ಯುರ್ ಮೃತ್ಯುರ್ ನಮಾಮ್ಯಹಮ್ " ಎಂದು ಪೂಜಿಸಿದ ದಿವ್ಯ ಸ್ಥಳ . ಇಲ್ಲಿ ಶ್ರೀ ಸ್ವಾಮಿ ಗುರು ಗ್ರಹಕ್ಕೆ ಅಧಿಪತಿ

೩ ಮಾಲೋಲ ನರಸಿಂಹ - ಇಲ್ಲಿ ಶ್ರೀ ಸ್ವಾಮಿ ಲಕ್ಷ್ಮಿ ಲೋಲ ಶ್ರೀ ಲಕ್ಷ್ಮಿ ನರಸಿಂಹ ನಾಗಿ ನೆಲೆಸಿದ್ದಾನೆ. ಅಲ್ಲೇ ಪಕ್ಕದಲ್ಲಿ ಪ್ರಹ್ಲಾದ ರಾಯರು ಓದಿದ ಸ್ಥಳವಿದೆ ಅಲ್ಲಿ ಪ್ರಹ್ಲಾದ ವರದ ನಾಗಿ ಶ್ರೀ ಸ್ವಾಮಿ ಗುಹೆಯೊಳಗೆ ನೆಲೆಸಿದ್ದಾನೆ ಅತ್ಯಂತ ಸುಂದರ ಮೂರ್ತಿ . ಇಲ್ಲಿ  ಶ್ರೀ ಸ್ವಾಮಿ ಶುಕ್ರ  ಗ್ರಹಕ್ಕೆ ಅಧಿಪತಿ

೪ ಬೂವರಾಹ ನರಸಿಂಹ - ಇಲ್ಲಿ ಶ್ರೀ ಸ್ವಾಮಿ ಹಿರಣ್ಯ ಕಷಿಪು ವಿನ ತಮ್ಮ ಹಿರಣ್ಯಾಕ್ಷ ನ ವಧಿಸಿ ಬೂದೇವಿಯನ್ನು ರಕ್ಷಿಸಿದ ಶ್ರೀ ವರಾಹ ರೂಪದಲ್ಲಿ ನೆಲೆಸಿದ್ದಾನೆ  . ಶ್ರೀ ಸ್ವಾಮಿ ಬೂದೇವಿಯನ್ನು ತನ್ನ ಹೆಗಲ ಮೇಲೆ ಹೊತ್ತ ಮೂರ್ತಿ , ಬೋದೇವಿಯನ್ನೇ ಪೊರೆವ ಸ್ವಾಮಿ ನಮ್ಮನ್ನು ಪೊರೆಯನೇ . ಶ್ರೀ ಸ್ವಾಮಿ ಇಲ್ಲಿ ರಾಹು   ಗ್ರಹಕ್ಕೆ ಅಧಿಪತಿ

೫ ಕಾರಂಜಿ ನರಸಿಂಹ - ಶ್ರೀ ಹನುಮ ದೇವರು ಶ್ರೀ ರಾಮನನ್ನು ಕುರಿತು ತಪಗೈದ ಪುಣ್ಯ ಸ್ಥಳ , ಇಲ್ಲಿ ಹನುಮದೇವರಿಗೆ ಶ್ರೀ ದೇವರು ಒಂದು ಕೈಯಲ್ಲಿ ಚಕ್ರ ಹಿಡಿದ ಕೃಷ್ಣ ದೇವರಾಗಿ , ಇನ್ನೊಂದು ಕೈಯಲ್ಲಿ ಬಿಲ್ಲು ಬಾಣ ಹಿಡಿದ ಶ್ರೀ ರಾಮ ದೇವರಾಗಿ , ಮೂರು ಕಂಗಳಿಂದ ಶ್ರೀ ರುದ್ರದೇವರಾಗಿ , ಆದಿಶೇಷ ನಿಂದ ಒಳಗೂಡಿದ ಶ್ರೀ ವಿಷ್ಣು ಆಗಿ ಸ್ವಾಮಿ ನಿಂತಿದ್ದಾನೆ. ಇಲ್ಲಿ ಶ್ರೀ ಸ್ವಾಮಿ ಚಂದ್ರ  ನಿಗೆ  ಅಧಿಪತಿ

೬ ಭಾರ್ಗವ ನರಸಿಂಹ - ಇಲ್ಲಿ ಶ್ರೀ ದೇವರು ಜ್ವಾಲಾ ನರಸಿಂಹನ ಮೂರ್ತಿ ಯಲ್ಲಿ ನೆಲೆಸಿದ್ದಾನೆ , ಪರಶುರಾಮ ದೇವರು ಇಲ್ಲಿ ತಪಸ್ಸು ಮಾಡಿ ನೀನು ಹಿರಣ್ಯ ಕಷಿಪು ವನ್ನು ಹೊಟ್ಟೆ ಸೀಳಿದ ರೂಪವನ್ನು ತೋರಿಸು ಎಂದು ಕೇಳಿದಾಗ ಶ್ರೀ ಸ್ವಾಮಿ ಇಲ್ಲಿ ಭಾರ್ಗವ ನರಸಿಂಹ ರೂಪದಲ್ಲಿ ನೆಲೆಸಿದ್ದಾನೆ .ಇಲ್ಲಿ ಶ್ರೀ ಸ್ವಾಮಿ ಸೂರ್ಯ  ನಿಗೆ  ಅಧಿಪತಿ

೭ ಯೋಗಾನಂದ ನರಸಿಂಹ - ಇಲ್ಲಿ ಶ್ರೀ ದೇವರು ಪ್ರಹ್ಲಾದ ರಾಯರಿಗೆ ರಾಜ ವಿದ್ಯೆಯನ್ನು , ಯೋಗ ವಿದ್ಯೆಯನ್ನು ದಯಪಾಲಿಸಿದ ಪುಣ್ಯ ಸ್ಥಳ , ಇಲ್ಲಿ ಶ್ರೀ ಸ್ವಾಮಿ ಯೋಗ ನರಸಿಂಹ ನಾಗಿ ನೆಲೆಸಿದ್ದಾನೆ .ಇಲ್ಲಿ ಶ್ರೀ ಸ್ವಾಮಿ ಶನಿ  ಗ್ರಹಕ್ಕೆ ಅಧಿಪತಿ.

೮  ಛತ್ರವಾಟ  ನರಸಿಂಹ - ಇಲ್ಲಿ ಶ್ರೀ ದೇವರು ಅಲಂಕಾರ ಪ್ರಿಯ , ನಾದ ಪ್ರಿಯ , ಸಂಗೀತ ಪ್ರಿಯ ನಾಗಿ ನೆಲೆಸಿದ್ದಾನೆ   .ಇಲ್ಲಿ ಶ್ರೀ ಸ್ವಾಮಿ ಕೇತು   ಗ್ರಹಕ್ಕೆ ಅಧಿಪತಿ.

೯ ಪಾವನ ನರಸಿಂಹ - ಇಲ್ಲಿ ದಟ್ಟ ಅರಣ್ಯದ ಮಧ್ಯೆ ಶ್ರೀ ಸ್ವಾಮಿ ಚಂಚು ಲಕ್ಷ್ಮಿ ಯ ವಡೆಯ ಸಲಕ ಪಾವನ ಮೂರ್ತಿ , ಸಕಲ ಮಂಗಳ ಮೂರ್ತಿ ಅತ್ಯಂತ ಸುಂದರ ಮೂರ್ತಿ ಶ್ರೀ ಪಾವನ ನರಸಿಂಹ ನಾಗಿ ನೆಲೆಸಿದ್ದಾನೆ , ಸುತ್ತಲೂ ದಟ್ಟ ಅರಣ್ಯ ಮಧ್ಯೆ ಮುರಿದ  ರಸ್ತೆ ಯಲ್ಲಿ ಜೀಪ್ ಮೇಲೆ ಹೋಗಬೇಕು , ನಾನು ಬೈಕ್ ಅಲ್ಲಿ ಶ್ರೀ ಸ್ವಾಮಿ ಯ ದರ್ಶನಕ್ಕೆ ಹೋದೆ , ಶ್ರೀ ಗುಡಿಯಲ್ಲಿ ಅತ್ಯಂತ ಪವಿತ್ರವಾದ ಸುದರ್ಶನ ಹಾಗು ನರಸಿಂಹ ಸಾಲಿಗ್ರಾಮ ವಿದೆ. ಪಾವನ ನರಸಿಂಹನ ನೋಡಿದ ನನ್ನ ಜೀವನ ಪಾವನ. ಇಲ್ಲಿ ಶ್ರೀ ಸ್ವಾಮಿ ಬುಧ  ಗ್ರಹಕ್ಕೆ ಅಧಿಪತಿ

 

ಉಗ್ರ  ಸ್ಥo ಭ : ಶ್ರೀ ಸ್ವಾಮಿ ಭೇದಿಸಿದ ಸ್ಥo ಭ ,ಈ ದಿವ್ಯ   ಸ್ಥಳಕ್ಕೆ  2 kms ಕಠಿಣ ಆರೋಹಣ ಮಾಡಬೇಕು , ಆದರೆ ಅಲ್ಲಿ ತಲಿಪಿದ ಮೇಲೆ ಆ ಧನ್ಯತೆಯ ಭಾವ ಎಲ್ಲ ಆಯಾಸವನ್ನು ನೀಗುತ್ತದೆ


ಪ್ರಹ್ಲಾದ ವರದ ನರಸಿಂಹ (lower  ahobalam ) : ಕಲಿಯುಗ ಕಲ್ಪತರು ಶ್ರೀ ಸ್ವಾಮಿ ಏಳು ಬೆಟ್ಟಗಳೊಡೆಯ ಶ್ರೀ ಶ್ರೀನಿವಾಸ ಮತ್ತು ಪದ್ಮಾವತಿ ತಾಯಿಯ ವಿವಾಹ ನಂತರ ಶ್ರೀ ಸ್ವಾಮಿ ಮತ್ತು ತಾಯಿ ಸ್ಥಾಪಿಸಿ ಅನ್ನದಾನ ಮಾಡಿದ ಶ್ರೀ ಪ್ರಹ್ಲಾದ ವರದ ನರಸಿಂಹ. ಶ್ರೀ ದೇವರನ್ನು ಕಣ್ತುಂಬಲು ಎರಡು ಕಣ್ಣು ಸಾಲದು. ಪ್ರಹ್ಲಾದ ವರದ ಗೋವಿಂದ ಗೋವಿಂದ

 

ಅಹೋಬಲ ಶ್ರೀ ಸ್ವಾಮಿಯ ದರ್ಶನ ಮಾಡಿದ ನಾನೇ ಧನ್ಯ .

ಸೋಮವಾರ ಅಹೋಬಲದಿಂದ ಹೊರಟು 360 kms ಚಲಿಸಿ ಮನೆಗೆ ಸೇರಿದೆ .

ನೀವು  ಶ್ರೀ ಸ್ವಾಮಿಯ ದರ್ಶನ ಮಾಡಿ ಧನ್ಯರಾಗಿ.

 

ನಮಸ್ಕಾರ

 

ನನಗೆ ಸಹಾಯ ಮಡಿದ ನನ್ನ ಗೈಡ್ ಶ್ರೀ ಲಿಂಗಮಯ್ಯ ಅವರಿಗೆ ಧನ್ಯವಾದ , ಅವರ ನಂಬರ್  9100749724    

YouTube link of my ride video
https://youtu.be/X2jbshSwu1w