Sunday, March 10, 2019

ಎಪ್ಪತ್ತು ತಿರುವುಗಳು

ಕೆಲವೊಮ್ಮೆ ನಾವು ಜೀವನದಲ್ಲಿ ಎಲ್ಲಾ ಮುಗಿಯಿತು, ಇದೆ ಕೊನೆ , ಇನ್ನು ದಾರಿ ಇಲ್ಲ ಎಂದು ನೀರಸ ವಾಗಿ ಕುಳಿತಾಗ ಎಲ್ಲರಿಗೂ ಎರಡು ಮಾರ್ಗಗಳು ಇರುತ್ತವೆ , ಇದು ಕೊನೆ ಎಂದು ಹತಾಶೆ ಗೊಳ್ಳುವುದು ಅಥವ ಇದು ಕೊನೆಯಲ್ಲ ಕೇವಲ ಒಂದು ತಿರುವು ಮಾತ್ರ ಎಂದು ಮುನ್ನುಗುವುದು.

ಇದೇನಿದು ಪ್ರವಾಸ ಕಥನದಲ್ಲಿ philosophy ಎಂದುಕೊಂಡಿರ , ಬೈಕ್ ರೈಡಿಂಗ್ ಎಂಬ ಹವ್ಯಾಸ ಹಾಗೆ ಸ್ವಾಮಿ, ಪ್ರಕೃತಿಯ ಜೊತೆಗೂಡಿ ಅದರ ಮುಂಜಾನೆಯ ಚಳಿ , ಸೂರ್ಯೋದಯ , ಮಧ್ಯಾನದ ದಗೆ , ಹಸಿರು ಮರಗಳು , ಬಿನ್ನ ವಾದ ಹೂಗಳು , ಸಂಜೆಯ ತಂಪು , ಹಕ್ಕಿಗಳ ಚಿಲಪಿಲಿ , ಸೂರ್ಯಾಸ್ತ ಹಾಗೆ ಮುಖಕ್ಕೆ ಬಡಿಯುವ ಗಾಳಿ ಎಂತವನನ್ನು ಸಹ ತನ್ನ ಅಸ್ತಿತ್ವವನ್ನು ಮರೆೆತು ಏನೋ ಹಿರಿದರ ಕಡೆಗೆ ಮನ ಮಾಡುವಂತೆ ಮಾಡುತ್ತದೆ.ಅಂತದೆ ಒಂದು ತಾಣ ತಮಿಳುನಾಡಿನ ನಾಮಕ್ಕಲ್ ಬಳಿ ಇರುವ ಕೊಲ್ಲಿ ಮಲೆ , ಪ್ರಕೃತಿಯ ಒಂದು ರಮ್ಯ ತಾಣ , ಬೆಂಗಳೂರಿನಿಂದ ೩೦೦ kilometer ದೂರದಲ್ಲಿರುವ ಕೊಲ್ಲಿ ಮಲೆಗೆ ತಲುಪಲು ನಮಕ್ಕಲ್ ಇಂದ ಕಿರಿದಾದ ೭೦ ತಿರುವುಗಳ ರಸ್ತೆಯಲ್ಲಿ ಹೋಗಬೇಕು. ಇಕ್ಕೆಲಗಳಲ್ಲೂ ಕಾಡು ಮಧ್ಯದಲ್ಲಿ ರಸ್ತೆ ಬೈಕ್ ಸವಾರಿಗೆ ಸ್ವರ್ಗ ಸದೃಶ. ಬನ್ನಿ ಕಳೆದವಾರ ಹೋದ ಕೊಲ್ಲಿ ಮಲೆ ಯಲ್ಲಿ ತಗೆದ ಕೆಲವು ಫೋಟೋ ಗಳನ್ನು ನೋಡೋಣ.



ಪ್ರಕೃತಿಯ ಸೌಂದರ್ಯವನ್ನು ಕಣ್ಣ್ತುಂಬಿಕೊಳ್ಳುತ್ತಿರುವ ಗೆಳೆಯ ಹಾರಿಥ್


ಸೂರ್ಯಾಸ್ಥ ಹೇಗಿತ್ತು ? ಹೀಗಿತ್ತು !


ಕೊಲ್ಲಿ ಮಲೆಯಲ್ಲಿ ವಿಹಂಗಮ ಸೂರ್ಯಾಸ್ಥ


ಕೊಲ್ಲಿ ಮಲೆಯಲ್ಲಿ ವಿಹಂಗಮ ಸೂರ್ಯಾಸ್ಥ


ನನ್ನ ಪ್ರೀತಿಯ ಪ್ರವಾಸ ಸಂಗಾತಿ "ಕಪಿಧ್ವಜ"


ಪ್ರಕೃತಿಯ ಹಲವು ಬಣ್ಣಗಳು


ಫೋಟೋ ಗೆ ಪೋಸ್ ಕೊಡುತ್ತಿರುವ ಕಪಿಧ್ವಜ


ಗೆಳೆಯ ಹಾರಿಥ್ ನೊಂದಿಗೆ ಒಂದು ಫೋಟೋ


ಓಡಿಸಲು ಮಜಾ ನೀಡುವ ತಿರುವು ರಸ್ತೆಗಳು - ಫೋಟೋದಲ್ಲಿ : ಹಾರಿಥ್


ಓಡಿಸಲು ಮಜಾ ನೀಡುವ ತಿರುವು ರಸ್ತೆಗಳು ಫೋಟೋದಲ್ಲಿ : ನಾನು ಹಾಗು ಕಪಿಧ್ವಜ 


ಕೊಲ್ಲಿ ಮಲೆಯ ವಿಹಂಗಮ ನೋಟ



ಬೇಸಿಗೆ ಆಗಲೇ ಶುರುವಾಗಿದೆ , ಸೂರ್ಯನ ತೀಕ್ಷ್ಣ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಇನ್ನು ಕೆಲದಿನಗಳು ಬೈಕ್ ರೈಡ್ ಕೇವಲ ಹತ್ತಿರದ ತಾಣಗಳಿಗೆ ಹೋಗೋಣ ಎಂದು ಅಂದುಕೊಂಡಿದ್ದೇನೆ. ಇನ್ನೊಂದು ಪ್ರವಾಸ ಕಥನ ದೊಡನೆ ಮತ್ತೆ ಭೇಟಿ ಮಾಡೋಣ , ಶುಭವಾಗಲಿ :)


No comments:

Post a Comment